ನಾಡೋಜ ಎಚ್. ಎಲ್. ನಾಗೇಗೌಡ ರಾಷ್ಟ್ರೀಯ ಪ್ರಶಸ್ತಿ" ಪ್ರಶಸ್ತಿ ಮೊತ್ತ– 1 ಲಕ್ಷರೂ | ||
ಕ್ರಮ ಸಂಖ್ಯೆ | ವರ್ಷ | ಪ್ರಶಸ್ತಿ ವಿಜೇತರು |
1 | 2015ರಲ್ಲಿ | ಪದ್ಮಶ್ರೀ, ಪದ್ಮಭೂಷಣ ಪಾಂಡವಾನಿ ಕಲಾವಿದೆ ಶ್ರೀಮತಿ ತೀಜನ್ ಬಾಯಿ ಅವರಿಗೆ |
2 | 2016ರಲ್ಲಿ | ಮನಿಪಾಲದ ಹಸ್ತಶಿಲ್ಪ ಟ್ರಸ್ಟ್ನರೂವಾರಿ ಶ್ರೀ ವಿಜಯನಾಥ ಶೆಣೈಅವರಿಗೆ |
3 | 2017ರಲ್ಲಿ | ರಾಜಸ್ಥಾನಿ ಜನಪದ ಸೂಫಿ ಹಾಗೂ ಕಬೀರ್ತಾತ್ವಿಕ ಹಿನ್ನೆಲೆಯ ಪ್ರಸಿದ್ದ ಸಂಗೀತ ಕಲಾವಿದರಾದ ಶ್ರೀ ಮುಖ್ತಿಯಾರ್ ಅಲಿ ಅವರಿಗೆ |
4 | 2018ರಲ್ಲಿ | ತೊಗಲು ಗೊಂಬೆ ಯಕ್ಷಗಾನ ಕಲಾವಿದರಾದ ನಾಡೋಜ ಶ್ರೀ ಬೆಳಗಲ್ಲು ವೀರಣ್ಣ ಅವರಿಗೆ |
5 | 2019ರಲ್ಲಿ | ಜಾನಪದಶ್ರೀ ಪುರಸ್ಕೃತ ವೀರಗಾಸೆ ಕಲಾವಿದರಾದ ಶ್ರೀ ಎಂ.ಆರ್. ಬಸಪ್ಪಅವರಿಗೆ |
6 | 2020ರಲ್ಲಿ | ಕರೋನಾ ಕಾರಣ ಕಾರ್ಯಕ್ರಮ ಮಾಡಿರುವುದಿಲ್ಲ |
7 | 2021ರಲ್ಲಿ | ಸೂಫಿ ಗಾಯಕರಾದ ಜನಾಬ್ ಮೊಹಮ್ಮದ್ ಸಲೀಂ ಹಸನ್ ಚಿಸ್ತಿ ಅವರಿಗೆ |
8 | 2022ರಲ್ಲಿ | ಶ್ರೀಮತಿ ಅರ್ . ಅಂಬುಜಾಕ್ಷಿ , ಪುಲ್ಲುವನ್ ಪಾಟ್ಟು ಹಾಡುಗಾರ್ತಿ , ಕೇರಳ ರಾಜ್ಯ . ಅವರಿಗೆ |
1. ಪಾಂಡವಾನಿ ಕಲಾವಿದೆ ಶ್ರೀಮತಿತೀಜನ್ ಬಾಯಿ – –2015
ಪಾಂಡವರ ವಾಣಿ (ಪಾಂಡವಾಣಿ) ಕಲಾವಿದೆತೀಜನ್ ಬಾಯಿ ಅವರು ಮಹಾಭಾರತದ ಕಥೆಗಳನ್ನು ಸಂಗೀತ ವಾದ್ಯಗಳ ಹಿನ್ನೆಲೆಯಲ್ಲಿ ನಾಟಕೀಯವಾಗಿ ಪ್ರಸ್ತುತ ಪಡಿಸುವ ಬಗೆ ವಿಶಿಷ್ಟವಾದುದು ಕಣ್ಣೆದುರೇ ಮಹಾಭಾರತ ನಡೆಯುತ್ತಿದೆಯೇನೊಎಂದು ಭಾವಿಸುವಷ್ಟು ನಾಟಕೀಯತೆಗಳಿಂದ ಕೂಡಿದÀ ಸಂಭಾಷಣೆಗಳನ್ನು ಹೇಳುತ್ತಾ ಏಕಪಾತ್ರಾಭಿನಯವನ್ನು ಮಾಡುತ್ತಾಚತ್ತೀಸ್‍ಗಡದ ಸಾಂಪ್ರದಾಯಿಕ ಪಾಂಡವಾನಿ ಪ್ರದರ್ಶನ ಕಲೆಗೆ ದೇಸಿ ರೂಪ ನೀಡಿತನ್ನಅನನ್ಯಜನಪದಗಾಯನ ಶೈಲಿ, ಧ್ವನಿ ಏರಿಳಿತ ಮತ್ತು ಕಥಾರೂಪಕಗಳಿಂದ ಪ್ರೇಕ್ಷಕರನ್ನುರಂಜಿಸುತ್ತಾ, ಯುವ ಪೀಳಿಗೆಯನ್ನು ಜಾನಪದದಕಡೆಆಕರ್ಷಿಸುತ್ತಾ ಬಂದಿದ್ದಾರೆ. ಅವರÀಅತ್ಯಂತ ಪ್ರಸಿದ್ದ ಮತ್ತು ಪ್ರಶಂಸನೆಗೆ ಒಳಗಾದ ಪಾತ್ರಗಳೆಂದರೆ, ದ್ರೌಪದಿ ವಸ್ತ್ರಾಪಹರಣ, ದುಶ್ಯಾಸನನ ವಧೆ, ಭೀಷ್ಮಾರ್ಜುನರ ಕಾಳಗ.
ಪರಿಧಿ ಬುಡಕಟ್ಟಿನಿಂದ ಬಂದರೂಕಲೆಯನ್ನು ನಂಬಿ ಬದುಕಿ ಮಹಾಭಾರತದ ನೈತಿಕತೆಯನ್ನು ಸಾರಿದವರುತೀಜನ್ ಬಾಯಿ. ಸಣ್ಣಗುಡಿಸಲಿನಲ್ಲಿ ಈಗಲೂ ವಾಸ ಮಾಡುತ್ತಿದ್ದಾರೆ. ಅಂದಿನ ಪ್ರಧಾನಿ ಇಂದಿರಾಗಾಂಧಿಅವರ ಗಮನಕ್ಕೂ ಬಂದು ಪ್ರದರ್ಶನ ನೀಡಿದ್ದಾರೆ. ಇವರ ಕಲಾ ಸೇವೆಗೆ 1988ರಲ್ಲಿ ಪದ್ಮಶ್ರೀ 1995ರಲ್ಲಿ ಸಂಗೀತ ನಾಟಕಅಕಾಡೆಮಿ ಪ್ರಶಸ್ತಿ, 2003ರಲ್ಲಿ ಪದ್ಮಭೂಷಣ, 2009ರಲ್ಲಿ ಪದ್ಮವಿಭೂಷಣ ಪ್ರಶಸ್ತಿಗಳು ಲಭಿಸಿವೆ. ಅಲ್ಲದೆ, ರಾಷ್ಟ್ರೀಯಅಂತರರಾಷ್ಟ್ರೀಯ ಮನ್ನಣೆಗಳು ಲಭಿಸಿವೆ.
ಭಾರತದ ನ್ಯಾಷನಲ್ ಅಕಾಡೆಮಿ ಆಫ್ ಮ್ಯೂಸಿಕ್ ಡಾನ್ಸ್ ಮತ್ತು ಡ್ರಾಮಾ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
1980ರ ದಶಕದಲ್ಲಿಆರಂಭವಾಗಿಇಂಗ್ಲೆಂಡ್, ಪ್ರಾನ್ಸ್, ಸ್ವಿಟ್ಜರ್ಲಾಂಡ್, ಜರ್ಮನಿ, ಟರ್ಕಿ ಮಾರಿಷಸ್, ಮಾಲ್ಟಾ, ಮಲೇಷಿಯಾ, ಯೂರೋಪ್, ಇಟಲಿ, ಯಮನ್ ದೇಶಗಳಿಗೆ ಭಾರತದ ಸಾಂಸ್ಕೃತಿಕರಾಯಭಾರಿಯಾಗಿ ವಿಶ್ವದಾದ್ಯಂತ ಪ್ರದರ್ಶನ ನೀಡಿದ್ದಾರೆ.
ಭಾರತದಜನಪದ ಕಲೆಗೆ ಅಪೂರ್ವ ಸೇವೆ ಸಲ್ಲಿಸಿರುವ ಶ್ರೀಮತಿ ತೀಜನ್ ಬಾಯಿ ಅವರಿಗೆ ನಾಡೋಜಎಚ್. ಎಲ್. ನಾಗೇಗೌಡಜನ್ಮ ಶತಮಾನೋತ್ಸವದ ಸಂದರ್ಭದಲ್ಲಿಇದೇ ಮೊದಲ ಬಾರಿಗೆಕೊಡಮಾಡಲಾಗುತ್ತಿರುವ “ನಾಡೋಜಎಚ್. ಎಲ್. ನಾಗೇಗೌಡ” ರಾಷ್ಟ್ರೀಯ ಪ್ರಶಸ್ತಿಯನ್ನು ನೀಡಿಗೌರವಿಸಲಾಯಿತು.
2. ಡಾ. ವಿಜಯನಾಥ ಶೆಣೈ – ಹೆರಿಟೇಜ್ ವಿಲೇಜ್ ನಿರ್ಮಾಪಕರು – 2016
ಮಣಿಪಾಲದಡಾ. ವಿಜಯನಾಥ ಶೆಣೈಎಂದಾಕ್ಷಣ ಹೆರಿಟೇಜ್ ವಿಲೇಜ್' ಎಂಬ ದೇಶೀಯ ಹಾಗೂ ಅಂತರ್ದೇಶೀಯ ಮಟ್ಟದ ವಸ್ತು ಸಂಗ್ರಹಾಲಯವು ನೆನಪಾಗುತ್ತದೆ. ವೈವಿಧ್ಯಮಯವಾಗಿ ಹಲವಾರುಅದ್ಭುತ ಮನೆಗಳು ಹಾಗೂ ಅರಮನೆÀಗಳಲ್ಲಿ ಮರುಜೋಡಣೆಗೊಂಡುಅದೊಂದುಗ್ರಾಮಪರಂಪರೆಯ ಗುಚ್ಚವಾಗಿ ಆರು ಎಕರೆಗಳಲ್ಲಿ ಹರಡಿ ನಿಂತಿರುವ ನೋಟಕಣ್ಮುಂದೆ ಬರುತ್ತದೆ. ಇದು ಶೆಣೈಅವರಿಂದ
ಹಸ್ತಶಿಲ್ಪ ಟ್ರಸ್ಟ್’ ಎಂಬ ನಾಮಾಂಕಿತದಲ್ಲಿ ಹೆಸರುವಾಸಿಯಾಗಿದೆ. ಶೆಣೈಅವರು 1934ರ ಜೂನ್ 3 ರಂದು ಕರಾವಳಿಯ ಉಡುಪಿಯಲ್ಲಿ ಜನಿಸಿದರು. ಸಿಂಡಿಕೇಟ್ ಬ್ಯಾಂಕಿನಲ್ಲಿ ನೌಕರಿ ಸೇರಿ 1992 ರಲ್ಲಿ ಮೇನೇಜರ್ ಆಗಿ ನಿವೃತ್ತಿ ಹೊಂದಿದರು.
ಇರಲೊಂದು ಮನೆ ಮಾಡುವ ಕನಸಿನಲ್ಲಿ ಹಳೆ ಮನೆಗಳ ಕಂಬ ಕಿಟಕಿ, ಬಾಗಿಲು ಹಾಗೂ ಗ್ರಾಮ ವಸ್ತುಗಳನ್ನು ಸಂಗ್ರಹಿಸಿಕೊಂಡಿದ್ದರು. ಉಡುಪಿಯಲ್ಲಿಇಂಥಾ ಹಳೆ ಸಾಮಾನುಗಳಿಂದ ಮನೆ ಕಟ್ಟಿದರು. ಬೇಲೂರು ಹಳೇಬೀಡಿನ ಕಿರುಮಾದರಿಯೊಂದನ್ನು ಮರದಲ್ಲಿಕಡೆದುಕೆತ್ತಿದಂತೆಅವರ ಮನೆಯೇಒಂದು ಮ್ಯೂಸಿಯಂನಂತೆ ದೇಶೀ ಅಂತರ್‍ದೇಶೀ ಜನರನ್ನು ಆಕರ್ಷಿಸಿತು. ಮಾಧ್ಯಮಗಳು ಹಾಡಿ ಹೊಗಳಿದವು. ಇರಲುಕಟ್ಟಿದ ಮನೆಯನ್ನು ವಸ್ತು ಸಂಗ್ರಹಾಲಯವಾಗಿ ಮಾಡಿ ಸಾರ್ವಜನಿಕರಿಗೆತೆರೆದುಬಿಟ್ಟರು.
ಇದರ ಮುಂದಿನ ಭಾಗವೋಎಂಬಂತೆಆರುಎಕರೆಯಲ್ಲಿ `ಹೆರಿಟೇಜ್ ವಿಲೇಜ್’ ಅರಳಿ ನಿಂತಿದೆ. ಅದೊಂದು ಭವ್ಯ ಮನೆಗಳ ಹಾಗೂ ಅರಮನೆಗಳ ಗುಚ್ಚ. ಆ ಪ್ರತಿ ಮನೆಗಳ ಒಳಗೆ ವಸ್ತು ಸಂಗ್ರಹಾಲಯಗಳನ್ನಡಗಿಸಿಕೊಂಡಿರುವ ಲೋಕ. ವಿಜಯನಗರ ವೈಭವ, ನಿಜಾಮರ ಪರಂಪರೆ, ಸ್ಥಳೀಯ ಸುರಾಲ್‍ಅರಮನೆಘಟ್ಟದ ಕೆಳಗಿನ ಮನೆ, ಕೊಡಗು ಮನೆ, ಮಲೆನಾಡಿನ ಮನೆ, ರಾಜಾರವಿವರ್ಮನ ಕಲಾಕೃತಿಗಳು – ಹೀಗೆ ಆಚ್ಚರಿಯ ಲೋಕವಾಗಿದೆ.
ಇದೆಲ್ಲವೂ ನೂರಾರು ಕಾಷ್ಠ ಶಿಲ್ಪಕಾರರಿಂದ ಮಣ್ಣುಗಾರೆ ಕುಶಲ ಕಲೆಗಾರರಿಂದಕಲೆಯಾಗಿ ಅರಳಿ ಭವ್ಯರೂಪ ತಾಳಿ ನಿಂತಿವೆ. ಎಂಥೆಂಥಾ ಕಂಬಗಳು, ಕೆತ್ತನೆಗಳು, ಬಾಗಿಲು ಕಿಟಕಿಗಳು ತುಳಿದರೆ ಮುಟ್ಟಿದರೆಗುರುತು ಬೀಳುವ ಸ್ವಚ್ಚತೆಯ ಪರಂಪರೆಯ ನೆಲಗೋಡೆಗಳು. ಶೆಣೈಅವರದುಏಕವ್ಯಕ್ತಿಯಅದ್ಭುತ ಸಾಧನೆ. ಕುಪ್ಪಳಿಯಲ್ಲಿ ಕುವೆಂಪು ಮನೆ ಪುನರ್ ನಿರ್ಮಾಣವಾಗುವಾಗ ಶೆಣೈಅವರದೇ ನಿರ್ದೇಶನ. ಅವರನ್ನು ನಾರ್ವೆದೇಶಕರೆದು ಗೌರವಿಸಿದೆ. ಜಸ್ಲೊ ವಿ.ವಿ. ಆಹ್ವಾನಿಸಿದೆ. ಅವರಿಗೆರಾಜ್ಯ ಹಾಗೂ ಜಿಲ್ಲಾ ಸನ್ಮಾನದೊರೆತಿವೆ. ಕಾಶಿಯಲ್ಲಿ ಮುಂಬೈನಲ್ಲಿ, ಉಡುಪಿ ಮಠದಲ್ಲಿಗೌರವದೊರೆತಿದೆ. ಕರ್ನಾಟಕ ಮುಕ್ತ ವಿಶ್ವವಿದ್ಯಾಲಯಗೌರವಡಾಕ್ಟರೇಟ್ ನೀಡಿದೆ.
ಇಂಥಾಅಪರೂಪದ ವ್ಯಕ್ತಿಕರ್ನಾಟಕಜಾನಪದ ಪರಿಷತ್ತು, ನಾಡೋಜಎಚ್. ಎಲ್. ನಾಗೇಗೌಡರಿಗೆಅತ್ಯಂತ ಪ್ರಿಯವಾಗಿದ್ದವರು. ನಾಗೇಗೌಡರುಜಾನಪದ ಲೋಕ ಕಟ್ಟಿದಂತೆ ಮಣಿಪಾಲದಲ್ಲಿ ಹೆರಿಟೇಜ್ ವಿಲೇಜ್ ನಿರ್ಮಾಪಕರು. ಇದು ಆನೆಗೆ ಆನೆ ಸಾಟಿಎಂಬಂತೆಜಾನಪದ ಲೋಕ ಮತ್ತು ಹೆರಿಟೇಜ್‍ವಿಲೇಜ್‍ಎರಡೂಗ್ರಾಮ ಪರಂಪರೆಗಳನ್ನು ವಾಸ್ತವದಲ್ಲಿ ಉಳಿಸಿ ಮುಂದಿನ ಪೀಳಿಗೆಗೆ ಧಾಟಿಸುವ ಕಾರ್ಯಗಳಾಗಿವೆ.
ನಾಡೋಜ ನಾಗೇಗೌಡರ ನೆನಪಿನಲ್ಲಿಕರ್ನಾಟಕಜಾನಪದ ಪರಿಷತ್ತುಎರಡನೇ ವರ್ಷದರಾಷ್ಟ್ರೀಯ ಸನ್ಮಾನ ಹಾಗೂ ಒಂದು ಲಕ್ಷ ರೂ.ಗಳ ಪುರಸ್ಕಾರವನ್ನುಡಾ. ವಿಜಯನಾಥ ಶೆಣೈಅವರಿಗೆಅತ್ಯಂತ ಸಂಭ್ರಮದಲ್ಲಿ ನೀಡಿದೆ.
3. ಶ್ರೀ ಮುಖ್ತಿಯಾರ್ ಅಲಿ – ಸೂಫಿಗಾಯಕರು – 2017
ನಾಡೋಜ ನಾಗೇಗೌಡರ ನೆನಪಿನಲ್ಲಿಕರ್ನಾಟಕಜಾನಪದ ಪರಿಷತ್ತುಮೂರನೇ ವರ್ಷದರಾಷ್ಟ್ರೀಯ ಸನ್ಮಾನ ಹಾಗೂ ಒಂದು ಲಕ್ಷ ರೂ.ಗಳ ಪುರಸ್ಕಾರವನ್ನುಶ್ರೀ ಮುಖ್ತಿಯಾರ್ ಅಲಿ ಅವರಿಗೆಅತ್ಯಂತ ಸಂಭ್ರಮದಲ್ಲಿ ನೀಡಲಾಯಿತಯ. ಈ ಮೂಲಕ ಪದ್ಮಶ್ರೀ, ಪದ್ಮವಿಭೂಷಣದಂತಹಅತ್ಯುನ್ನತ ಪ್ರಶಸ್ತಿಗಳು ಇವರಿಗೆ ಲಭಿಸಲಿ ಎಂದು ಪರಿಷತ್ತು ಹಾರೈಸುತ್ತದೆ. ಓ ದೇಶಕಂಡಅತ್ಯಂತಅಪರೂಪದಗಾಯಕ ಶ್ರೀ ಮುಖ್ತಿಯಾರ್ ಅಲಿ. ಪುಗಲ್ ಎಂಬ ಚಿಕ್ಕ ಹಳ್ಳಿಯಲ್ಲಿ ಹುಟ್ಟಿ, ಈಗ ಅಂತರ್ರಾಷ್ಟ್ರೀಯ ಮಟ್ಟದಲ್ಲಿಕಬೀರ್ ಹಾಡುಗಳನ್ನು ಗಾಯಕರಾಗಿ ಪ್ರಸಿದ್ದಿ ಹೊಂದಿದ್ದಾರೆ. 700 ಕ್ಕೂ ವರ್ಷದ ಹಿಂದಿನ ಅರೆಅಲೆಮಾರಿಜನಾಂಗದ ಮಿರಾಸಿಸ್ ಸಮುದಾಯದಅವರುತಮ್ಮತಲೆಮಾರಿನ 26ನೇ ತಲೆಮಾರಿನವರು.ಅವರತಂದೆಗೆ ಮೊದಲು ಮುಖ್ತಿಯಾರ್ ಅಲಿ ಅವರು ಈ ಗಾಯನ ಪರಂಪರೆಗೆ ಬರುವುದುಇಷ್ಟವಿರಲಿಲ್ಲ, ಈ ಹಾಡುಗಳಿಂದ ಹೊಟ್ಟೆತುಂಬುವುದಿಲ್ಲ. ಇನ್ನೇನ್ನಾದರು ಮಗ ಮಾಡಲಿ ಎಂಬುದುಅವರ ಆಸೆ ಆಗಿತ್ತು. ಆದರೆ ಮುಖ್ತಿಯಾರ್‍ಅವರುತಂದೆಯನ್ನು ಮಾತನ್ನು ಕೇಳಲಿಲ್ಲ. ‘ನನಗೆ ಸಂಗೀತ ಕಲಿಸಿಕೊಡು. ನನಗೆ ಬೇರೆಯದರಲ್ಲಿ ಆಸಕ್ತಿ ಇಲ್ಲಎಂದರು.’ ಹೀಗೆ ತಂದೆಯಿಂದಜನಪದ ಸೂಫಿ ಹಾಡುಗಳನ್ನು ಕಲಿತರು. ಅತ್ಯಂತಕಡುಬಡತನದಲ್ಲೂ ಹಾಡುಗಳನ್ನು ಹಾಡುವುದನ್ನು ಬಿಡಲಿಲ್ಲ. ಅವರಕಬೀರ್ ಮತ್ತು ಬುಲ್ಲೇಶ್ ಶಾಹ್ ಹಾಡುಗಳು ಪ್ರಸಿದ್ಧ. 2007 ರಲ್ಲಿ ವಿಶ್ವ ಸಂಗೀತ ಸಕ್ರ್ಯೂಟ್ನಿಂದಅವರನ್ನುಗುರುತಿಲಾಗಿದೆ.
ದೇಶ ವಿದೇಶಗಳಲ್ಲಿ ಅವರುಕಬೀರ್‍ಅವರು ಸೂಫೀಜನಪದ ಗೀತೆಗಳನ್ನು ಹಾಡಿ ನಮ್ಮದೇಶಕ್ಕೆಖ್ಯಾತಿತಂದಿದ್ದಾರೆ. ತಾಶನ್, ಬಾಂಬೆ ಸಮ್ಮರ್ ಮುಂತಾದ ಚಲನಚಿತ್ರಗಳಿಗೆ ಜನಪದ ಸಂಗೀತ ಸಂಯೋಜನೆ ಮಾಡಿದ್ದಾರೆ. ತಮ್ಮ ಸಂಪೂರ್ಣಜೀವನವನ್ನೇ ಸೂಫಿಗಾಯನ ಮತ್ತುತಮ್ಮ ಪರಂಪರೆಯನ್ನು ಮುಂದುವರಿಸಲು ಮುಡುಪಾಗಿಟ್ಟಜನಾಬ್ ಮೀರ್‍ಮುಖ್ತಿಯಾರ್ ಅಲಿ ಅವರಿಗೆ ನಾಡೋಜ ಎಚ್.ಎಲ್.ನಾಗೇಗೌಡರಾಷ್ಟ್ರೀಯ ಪ್ರಶಸ್ರಿಯನ್ನು ನೀಡಿ ಗೌರವಿಸಿದೆ.
4. ನಾಡೋಜ ಶ್ರೀ ಬೆಳಗಲ್ಲು ವೀರಣ್ಣ – ತೊಗಲುಗೊಂಬೆಯಕ್ಷಗಾನಕಲಾವಿದರು – 2018
ಅತ್ಯಂತ ಸುಂದರ, ಕಲಾತ್ಮಕಕುಸುರಿಯಚರ್ಮದ ಗೊಂಬೆಗಳ ಬಳಸಿ ಆಡುವ ಪ್ರದರ್ಶನ “ತೊಗಲುಗೊಂಬೆ ಆಟ” ಈ ಪರಂಪರೆಗೆ ಸೇರಿದ ಮನೆತನದವರು ಶ್ರೀ ಬೆಳಗಲ್ಲು ವೀರಣ್ಣಅವರು. ಬಳ್ಳಾರಿಯಿಂದ ಇವರು ಮೊದಮೊದಲು ಈ ಆಟಕ್ಕೆ ಕಂಪನಿ ರಂಗಭೂಮಿಯಆಕರ್ಷಣೆಗೆ ಒಳಗಾಗಿ ರಂಗಭಾಷೆ, ರಂಗ ಸಂಗೀತಗಳ ಅರಗಿಸಿಕೊಂಡು ತಮ್ಮೊಳಗೆ ಹುರಿಗೊಳಿಸಿ ಹದಗೊಂಡವರು. `ಸ್ವಾತಂತ್ರ್ಯ
ಸಂಗ್ರಾಮ”, “ಬಾಪು”, “ಪ್ರವಾದಿ ಬಸವೇಶ್ವರ”, “ಸೀತಾಪಹರಣ” ಒಳಗೊಂಡ “ಕನಕದಾಸ”ರವರೆಗೂ ಮುನ್ನಡೆಸಿದ್ದಾರೆ. ಜೊತೆಗೆ ಪರಂಪರೆಯಆಟದ ಪ್ರದರ್ಶನವನ್ನುಕಾಯ್ದುಕೊಂಡಿದ್ದಾರೆ. ಶ್ರೀ ವೀರಣ್ಣಅವರ ನೇತೃತ್ವದತಂಡ ಈಗಾಗಲೇ ಸ್ವ್ಜಿಟ್ಜರ್ ಲ್ಯಾಂಡ್, ಜರ್ಮನಿ ಹಾಗೂ ಥಾಯ್ ಲ್ಯಾಂಡ್ ಪ್ರವಾಸಕೈಗೊಂಡು ಭಾರತೀಯ ಪರಂಪರೆ ಬಿಂಬಿಸುವ ಗೊಂಬೆಯಾಟವನ್ನು ಯಶ್ವಸಿ ಪ್ರದರ್ಶನ ನೀಡಿ ಗಮನ ಸೆಳೆದಿದ್ದಾರೆ.
84ರ ಈ ಹಿರಿಯರು ಅನುಭವಿಗಳು ಆದ ಶ್ರೀ ಬೆಳಗಲ್ಲು ಅವರಿಗೆ ನಾಡೋಜ ಪುರಸ್ಕಾರ, ರಾಜ್ಯೋತ್ಸವ ಪ್ರಶಸ್ತಿಗಳಲ್ಲದೆ ಜಾನಪದಕ್ಷೇತ್ರದ ಸಾಧಕರಿಗೆ ನೀಡುವಕರ್ನಾಟಕ ಸರ್ಕಾರದಅತ್ಯುನ್ನತ್ತ ಪ್ರಶಸ್ತಿ “ಜಾನಪದಶ್ರೀ”, ಕೇಂದ್ರ ಸರ್ಕಾರ ನೀಡುವ ಸಂಗೀತ ನಾಟಕಅಕಾಡೆಮಿ ಪ್ರಶಸ್ತಿ, ಕರ್ನಾಟಕಜಾನಪದಯಕ್ಷಗಾನಅಕಾಡೆಮಿ ಪ್ರಶಸ್ತಿ, ಕರ್ನಾಟಕ ನಾಟಕಅಕಾಡೆಮಿ ಪ್ರ್ರಶಸ್ತಿ, ಜಾನಪದ ಲೋಕದ “ದೊಡ್ಡಮನೆ ಪ್ರಶಸ್ತಿ”, ಗುಜರಾತಿನಿಂದ ಕಮಲಾದೇವಿ ಚಟ್ಟೋಪಾದ್ಯಯ" ಪ್ರಶಸ್ತಿ,
ಗೋಮತಿ ಪ್ರಶಸ್ತಿ”, ತಮಿಳುನಾಡಿನಿಂದ “ಕಲೈ ಭೂಷಣ” ಪ್ರಶಸ್ತಿ,ಯು ಸಂದಿದೆ. ಕಂಪನಿರಂಗಭೂಮಿಯ ಈ ಸಾಧಕರದುತೊಗಲುಗೊಂಬೆಆಟದಲ್ಲಿಅನನ್ಯದಅನುಭವ. ಸೊಗಸಾದ ಹಾಡುಗಾರರುಆದ ಮಹನೀಯರನ್ನುಗೌರವಿಸಲಾಗಿದೆ.
5. ಜಾನಪದ ಶ್ರೀ ಪುರಸ್ಕೃತ ಶ್ರೀ ಎಂ.ಆರ್. ಬಸಪ್ಪ – ವೀರಗಾಸೆ ಕಲಾವಿದರು -2019
ಚಿಕ್ಕಮಗಳೂರು ಜಿಲ್ಲಾತರೀಕೆರೆತಾಲ್ಲೂಕಿನಇತಿಹಾಸ ಪ್ರಸಿದ್ಧ ಶಿವಯೋಗಿ ಸಿದ್ದರಾಮನ ಗದ್ದುಗೆಇರುವ ಸೊಲ್ಲಾಪುರಕ್ಕೆ ಹೊಂದಿಕೊಂಡಿರುವ ಮಾಳೇನಹಳ್ಳಿಯ ಶ್ರೀ ಎಂ. ಆರ್.ಬಸಪ್ಪ ನಾಡಿನ ಹಿರಿಯಜಾನಪದಕಲಾವಿದರಲ್ಲಿಒಬ್ಬರು.ತಂದೆರಂಗಪ್ಪ, ತಾಯಿ ನೀಲಮ್ಮ. 1936ರಲ್ಲಿ ಜನನ. ಬಾಲ್ಯದಿಂದಲೂ ವೀರಗಾಸೆಕಲೆಯೇ ಬಸಪ್ಪನವರ ಬದುಕಿನ ಹಾಸು ಹೊದಿಕೆ. ವೀರಗಾಸೆಕಲೆಗಾಗಿಯೇತಮ್ಮನ್ನು ಅರ್ಪಿಸಿಕೊಂಡಿರುವ ಮಾಳೇನಹಳ್ಳಿ ಬಸಪ್ಪಕರ್ನಾಟಕವಷ್ಟೇಅಲ್ಲದೆದೇಶದ ಬೇರೆ ಬೇರೆ ಕಡೆಗಳಲ್ಲೂ ತಮ್ಮತಂಡದಕಲಾಪ್ರರ್ದಶನ ನೀಡಿದ್ದಾರೆ.
ಶ್ರೀ ಎಂ.ಆರ್.ಬಸಪ್ಪಕನ್ನಡದಗಂಡು ಕಲೆ ಎನಿಸಿರುವ ವೀರಗಾಸೆಯಲ್ಲಿ ನೂರಾರುಯುವಕರಿಗೆತರಬೇತಿ ನೀಡಿದ್ದಾರೆ. ಹಳ್ಳಿ ಹಳ್ಳಿಗೆ ತಿರುಗಿ ವೀರಗಾಸೆಕಲೆಯಅಭಿರುಚಿ, ಆಸಕ್ತಿಗಳನ್ನು ಬೆಳೆಸಿದ್ದಾರೆ. ಜನಪದಕಲೆಯನ್ನೇಜೀವನ ತಪಸ್ಸಿನಂತೆ ಸಾಧಿಸಿರುವ ಎಂ. ಆರ್.ಬಸಪ್ಪ ಶರಣ ಸಂಸ್ಕೃತಿಯ ಸಹೃದಯದ ಮೃದು ಸ್ವಭಾವದಜನಪದ ಕಲಾವಿದ.ಪ್ರಚಾರ-ಪ್ರಸಿದ್ಧಿಗಳ ಪರಿಚಯವಿಲ್ಲದ ಹಳ್ಳಿಯ ಬಳ್ಳಿ.ಹುಟ್ಟಿನಿಂದ ಕೈಹಿಡಿದ ಬಡತನ. ಕಲೆಯಲ್ಲಿ ಮೈಮರೆತಜೀವನ. ಐವತ್ತು ವರ್ಷಗಳಿಂದ ನಿರಂತರವಾಗಿ ವೀರಗಾಸೆಕಲೆಯತರಬೇತಿ ಮತ್ತು ಪ್ರದರ್ಶನ ನೀಡುತ್ತಾ ಬಂದಿರುವ ಬಸಪ್ಪಜಾನಪದಕ್ಷೇತ್ರದಅಭಿಮಾನ. ಹುಟ್ಟುಕಲಾವಿದ ಶ್ರೀ ಎಂ.ಆರ್. ಬಸಪ್ಪನವರಿಗೆಕರ್ನಾಟಕರಾಜ್ಯ ಸರ್ಕಾರ 2002ನೇ ಸಾಲಿನ ಒಂದು ಲಕ್ಷರೂ. ಮೌಲ್ಯದ “ಜಾನಪದಶ್ರೀ” ಪ್ರತಿಷ್ಠಿತ ಪ್ರಶಸ್ತಿ ನೀಡಿ ಗೌರವಿಸಿದೆ.ಅವರ ಕಲಾನುಭವ ಮತ್ತು ಕಲಾನಿಷ್ಠೆಗಾಗಿ ಅನೇಕ ಪ್ರಸಸ್ತಿ-ಪುರಸ್ಕಾರದೊರಕಿದೆ.
ಜನಪದಕ್ಷೇತ್ರದ ವೀರಗಾಸೆಕಲಾಪ್ರಕಾರದಲ್ಲಿಅಪೂರ್ವ ಸೇವೆ ಮಾಡಿದಅವರಜೀವಮಾನದ ಸಾಧನೆಗಾಗಿಕರ್ನಾಟಕದಅತ್ಯಂತ ಹಿರಿಯ ವೀರಗಾಸೆಕಲಾವಿದರಾದ ಶ್ರೀ ಎಂ. ಆರ್.ಬಸಪ್ಪಅವರಿಗೆಕರ್ನಾಟಕಜಾನಪದ ಪರಿಷತ್ತು 2019ನೇ ಸಾಲಿನ ಒಂದು ಲಕ್ಷರೂ.ಮೌಲ್ಯದ “ನಾಡೋಜಎಚ್.ಎಲ್. ನಾಗೇಗೌಡರಾಷ್ಟ್ರೀಯ ಪ್ರಶಸಿ”್ತ ಯನ್ನುಅತ್ಯಂತ ಸಂಭ್ರಮದಲ್ಲಿ ನೀಡಿ ಗೌರವಿಸಿದೆ.
7.ಜನಾಬ್ ಮೊಹಮ್ಮದ್ ಸಲೀಂ ಹಸನ್ ಚಿಸ್ತಿ – ಸೂಫಿಗಾಯಕರು – 2021
ಉತ್ತರ ಪ್ರದೇಶದಉಸ್ತಾದ್ ಸಲೀಂ ಹಸನ್ ಚಿಸ್ತಿ ಅವರು ಭಾರತದ ಸೂಫಿ ಸಂಗೀತದಅಗ್ರಮಾನ್ಯ ಹೆಸರುಗಳಲ್ಲಿ ಒಬ್ಬರು. ಆಗ್ರಾದ ಫತೇಪುರ್ ಸಿಕ್ರಿ ದರ್ಗಾದಲ್ಲಿ ಮತ್ತುರಾಜಅಕ್ಬರ್‍ನದರÀಬಾರಿನಲ್ಲಿ ಸೂಫಿ ಸಂಗೀತದ ಪರಂಪರೆಯನ್ನು ಸುಶ್ರಾವ್ಯವಾಗಿ ಹಾಡುತ್ತಾ ಬಂದಿರುವ 17ನೇ ತಲೆಮಾರಿನವರುಇವರು. ಫತೇಪುರ್ ಸಿಕ್ರಿಯ ಖ್ವಾಜಾ ಮೊಹಿನುದ್ದೀನ್ ಚಿಸ್ತಿ ಅವರ ಪರಂಪರೆಯಲ್ಲಿ ಪಳಗಿದ ಶೇಕ್ ಸಲೀಂ ಚಿಸ್ತಿ ಮತ್ತು ನೂರ್ ಮೊಹಮ್ಮದ್ ಚಿಸ್ತಿ ಹೆಸರಾಂತ ಸೂಫಿಗಾಯಕರಗರಡಿಯಲ್ಲಿ ವಿಭಿನ್ನ ರಾಗಗಳ ಸಂಯೋಜನೆಯಲ್ಲಿ ಕವ್ವಾಲಿಗಳನ್ನು ಹಾಡುವ ಮೊಹಮ್ಮದ್ ಸಲೀಂ ಹಸನ್ ಚಿಸ್ತಿ ಅವರಿಗೆ ನಾಡೋಜಎಚ್. ಎಲ್. ನಾಗೇಗೌಡ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.
ಶ್ರೀಯುತರು ತಮ್ಮ 17ನೇ ತಲೆಮಾರಿನಿಂದ ನಡೆಸಿಕೊಂಡು ಬಂದಿರುವ ಸೂಫಿ ಭಕ್ತಿ ಪಂಥÀದಲ್ಲಿತಮ್ಮನ್ನು ತೊಡಗಿಸಿಕೊಂಡು ಇಡೀ ಮನುಷ್ಯ ಕುಲವೇ ಒಂದುಎಂದುತಮ್ಮ ಸಂಗೀತದಲ್ಲಿ ಪ್ರೇಮ ಮತ್ತು ವಿಶ್ವ ಭಾತೃತ್ವವನ್ನು ಸಾರಿದ್ದಾರೆ. ಕವ್ವಾಲಿ ಸೂಫಿ ಇಸ್ಲಾಮಿಗಳ ಭಕ್ತಿಗೀತೆಯಾಗಿದ್ದು, ಇವರಕಲೆಯ ಮುಖಾಂತರ ಅಭಿವ್ಯಕ್ತಿಗೊಳ್ಳುತ್ತದೆ. ಹಿಂದುಸ್ಥಾನಿ ಸಂಗೀತದ ಮಿಶ್ರಣವೂ ಸೂಫಿಕವ್ವಾಲಿ ಹಾಡುಗಳಲ್ಲಿ ಕಾಣ ಬರುತ್ತದೆ. ಕನ್ನಡದÀÀ ಶಿಶುನಾಳ ಶರೀಫರ ನೆನಪುಗಳನ್ನು ತರುವಇವರ ಸಂಗೀತದಲ್ಲಿ ಸಂತನ, ದಾರ್ಶನಿಕನ ತತ್ವಗಳಿವೆ.
ಸಲೀಂ ಹಸನ್ ಚಿಸ್ತಿ ಅವರು ದೇಶ-ವಿದೇಶಗಳಲ್ಲಿ ತಮ್ಮಕವ್ವಾಲಿ ಸಂಗೀತವನ್ನು ಸೂಫಿ ಸಂಗೀತ ಪ್ರಿಯರಿಗೆ ಉಣಬಡಿಸಿದ್ದಾರೆ. ಅಕಾಶವಾಣಿಯ “ಎ”ಗ್ರೇಡ್‍ಕಲಾವಿದರೂಆಗಿರುವಇವರುದೂರದರ್ಶನ, ಜೀ-ಮ್ಯೂಸಿಕ್, ಟಿ-ಸಿರೀಸ್ ಇತರೆ ನೂರಾರು ಟಿವಿ ಕಾರ್ಯಕ್ರಮಗಳನ್ನು ನೀಡಿರುತ್ತಾರೆ. ಹಿಂದಿ ಸಿನೆಮಾಗಳಾದ “ಪರದೇಶ್”, “ಜಿಗರಿಯಾ” ಮತ್ತು “ವಹಾಂ ತಾಜ್” ಸಿನಿಮಾಗಳಲ್ಲಿ ಇವರ ಸಂಗೀತ ಸುಧೆಯು ಪರವಶಗೊಳಿಸುವ ಮಾಧುರ್ಯತುಂಬಿದ ಗೀತೆಗಳು ಪ್ರಸಿದ್ಧವಾಗಿವೆ. ಇವರ ಸಂಗೀತಸೇವೆಯನ್ನು ಗುರುತಿಸಿ ಕ್ಯಾಲಿಪೆÇೀರ್ನಿಯಾ ಸಂಗೀತ ವಿಶ್ವವಿದ್ಯಾಲಯವುಇವರನ್ನು ಸನ್ಮಾನಿಸಿ ಗೌರವಿಸಿದೆ. ಶ್ರೀಲಂಕಾ, ದುಬೈ, ಬ್ರಿಟನ್ ಮತ್ತು ಬಾಂಗ್ಲ ದೇಶಗಳ ಜಾಗತಿಕ ಸಂಗೀತ ವೇದಿಕೆಗಳಲ್ಲಿ ಇವರು ಸೂಫಿ ಕವ್ವಾಲಿಗಳನ್ನು ಹಾಡಿ ದಿಗ್ಗಜರೆನಿಸಿಕೊಂಡಿದ್ದಾರೆ.
ಸೂಫಿ ಸಂಗೀತಕಲಾಪ್ರಕಾರದಲ್ಲಿಅಪೂರ್ವ ಸೇವೆ ಮಾಡಿದಅವರಜೀವಮಾನದ ಸಾಧನೆಗಾಗಿಸೂಫಿ ಸಂಗೀತಕಲಾವಿದರಾದ“ಜನಾಬ್ ಮೊಹಮ್ಮದ್ ಸಲೀಂ ಹಸನ್ ಚಿಸ್ತಿ” ಅವರಿಗೆಕರ್ನಾಟಕಜಾನಪದ ಪರಿಷತ್ತು 2021ನೇ ಸಾಲಿನ ಒಂದು ಲಕ್ಷರೂ.ಮೌಲ್ಯದ “ನಾಡೋಜಎಚ್. ಎಲ್. ನಾಗೇಗೌಡರಾಷ್ಟ್ರೀಯ ಪ್ರಶಸಿ”್ತ ಯನ್ನುಅತ್ಯಂತ ಸಂಭ್ರಮದಲ್ಲಿ ನೀಡಿ ಗೌರವಿಸಿದೆ.
8. ಶ್ರೀಮತಿ ಅರ್ . ಅಂಬುಜಾಕ್ಷಿ , ಪುಲ್ಲುವನ್ ಪಾಟ್ಟು ಹಾಡುಗಾರ್ತಿ , ಕೇರಳ ರಾಜ್ಯ . 2022
ನಾಗಕಳಂ ಕೇರಳದ ಅತ್ಯಂತ ಪ್ರಾಚೀನ ಧಾರ್ಮಿಕ ಕಲೆ. ಸಂಘಮ್ ಕಾಲದಿಂದಲೂ ಈ ಆಚರಣೆ ಪ್ರಚಲಿತದಲ್ಲಿದೆ ಎನ್ನಲಾಗುತ್ತಿದೆ. ನಾಗ ದೇವಸ್ಥಾನಗಳಲ್ಲಿ ಪ್ರಕೃತಿದತ್ತವಾದ ಐದು ಬಣ್ಣಗಳ ಪುಡಿಯಿಂದ ಕಲಂ-ರಂಗೋಲಿಯಲ್ಲಿ ಸರ್ಪವನ್ನು ಮೆಚ್ಚಿಸಲು ಪೂಜೆ – ಆರಾಧನೆಯೊಂದಿಗೆ ವಿಶಿಷ್ಟವಾಗಿ ನೃತ್ಯ ಪೂಜೆ ಆಚರಿಸಲಾಗುತ್ತದೆ. ಸರ್ಪ ತುಳ್ಳಲ್ (ಹಾವುಗಳ ನೃತ್ಯ) ಥಿರಿಯುಜಿಚಿಲ್ (ಬೆಂಕಿ ನೃತ್ಯ) – ನೃತ್ಯಗಳನ್ನು ವಿಶೇಷವಾಗಿ ದೇವಸ್ಥಾನಗಳಲ್ಲಿ ಅಥವಾ ಹಳೆಯ ವಾಡೆಗಳಲ್ಲಿ ಪುಲ್ಲುವ ಪಾಟ್ಟು ಹಾಡುಗಳನ್ನು ಹಾಡುತ್ತ, ಸರ್ಪವನ್ನು ಸಮಾಧಾನ ಪಡಿಸುವ ರೀತಿಯಲ್ಲಿ ಕುಟುಂಬದ ಯೋಗ ಕ್ಷೇಮಕ್ಕಾಗಿ ಸರ್ಪ ದೇವರುಗಳ ಪೂಜೆ ಮಾಡಲಾಗುತ್ತದೆ. ಪುಲ್ಲುವನ್ ಸಮುದಾಯದವರಿಗೆ ಸರ್ಪಗಳ ಆಚರಣೆ ಮಾಡುವುದರಿಂದ ನಾಗಮಂಪಾಟಿಕಲ್ ಎಂದು ಕರೆಯುತ್ತಾರೆ.
ಕೇರಳದಲ್ಲಿ ಪುಲ್ಲುವನ್ ಪಾಟ್ಟು ಸರ್ಪಕಳಂ, ನಾಗಪಾಟ್ಟು ಎಂದು ಕರೆಯುವ ಈ ಪ್ರಾಚೀನ ದೈವಿ ಕಲೆಯನ್ನು ಪುಲ್ಲುವ ಸಮುದಾಯದ ಜನರು ಪೀಳಿಗೆಯಿಂದ ಪೀಳಿಗೆಗೆ ಮುಂದುವರಿಸಿಕೊಂಡು ಬಂದಿದ್ದಾರೆ. ಅವರಲ್ಲಿ ಪ್ರಮುಖ ಹೆಸರು ಶ್ರೀಮತಿ ಆರ್. ಅಂಬುಜಾಕ್ಷಿ. ಇವರ ಪತಿ ದಿವಂಗತ ಶ್ರೀ ಅಚ್ಚುತನ್ ಸಹ ಪ್ರಸಿದ್ಧ ಕಲಾವಿದರು. ಈಗ ಮಕ್ಕಳಾದ ಜ್ಯೋತಿಲಕ್ಷಿ, ಮಗ ಸುಧೀರ್ ಮತ್ತು ಶ್ರೀಕಾಂತ್ ಸಹ ಪುಲ್ಲುವ ಪಾಟ್ಟು ಕಲಾವಿದರಾಗಿ ಹೆಸರು ಮಾಡಿದ್ದಾರೆ. ಪೂಜೆಯಲ್ಲಿ ಅವರು ಸರ್ಪವು ಜೀವಂತವಾಗಿದೆ ಎನ್ನುವಂತೆ ತಾವೇ ಸರ್ಪವಾಗಿ ಅನುಭವಿಸಿ ಹಾಡು ನೃತ್ಯಗಳನ್ನು ಮಾಡಿ ವಿಶೇಷ ವಾದ್ಯದೊಂದಿಗೆ ಪೂಜೆ ಮಾಡುತ್ತಾರೆ. ಈ ಆಚರಣೆಗೆ ಫಲವಂತಿಕೆಯ ಆಚರಣೆ ಎಂದು ಕರೆಯುತ್ತಾರೆ. ಸರ್ಪಾರಾಧನೆಯಿಂದ ಕುಟುಂಬ ಕಲ್ಯಾಣ, ಸಂತಾನ ಬಯಕೆ ಮತ್ತು ರೋಗ-ರುಜಿನೆಗಳ ನಿವಾರಣೆ ಆಗುತ್ತದೆ ಎಂದು ಭಕ್ತಾಧಿಗಳು ನಂಬಿರುತ್ತಾರೆ. ಈ ನೃತ್ಯ ಪೂಜೆಯಲ್ಲಿ ಪುಲ್ಲುವರು ಹಾಡುಗಳನ್ನು ಹಾಡುತ್ತಾ ಪುಲ್ಲುವ ಕುಟಮ್ ವಾದ್ಯ, ಇಳತಾಳಂ ಪುಲ್ಲುವ ವೀಣೆಗಳನ್ನು ಬಳಸುತ್ತಾರೆ.
ಶ್ರೀಮತಿ ಅಂಬುಜಾಕ್ಷಿ ಅವರು ೧೯೬೧ರಿಂದಲೂ ಪುಲ್ಲುವನ್ ಪಾಟ್ಟು ಕಲಾ ಸೇವೆಯನ್ನು ಮಾಡುತ್ತಾ ಬಂದಿದ್ದಾರೆ. ಇವರು ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ದೇಶದ ವಿವಿದೆಡೆ ಕಲಾ ಪ್ರದರ್ಶನ ಮಾಡಿದ್ದಾರೆ. ಕೇರಳದ ಜಾನಪದ ಅಕಾಡೆಮಿ ಫೆಲೋಷಿಪ್, ಜಾನಪದ ಅಕಾಡೆಮಿ ಪ್ರಶಸ್ತಿ, ಪ್ರವಾಸೋದ್ಯಮ ನಿಗಮದ ಉತ್ಸವಂ ಪ್ರಶಸ್ತಿ – ಹೀಗೆ ಅನೇಕ ಪ್ರಶಸ್ತಿಗಳು ಇವರಿಗೆ ಸಂದಿದೆ. ಆಕಾಶವಾಣಿ ಕಲಾವಿದರೂ ಆಗಿರುವ ಇವರಿಗೆ ಇವರ ಜೀವಮಾನದ ಸಾಧನೆಗಾಗಿ ತನ್ನ ಪರಂಪರೆಯನ್ನು ಮುಂದಿನ ಪೀಳಿಗೆಗಾಗಿ ನೀಡಿದ ಕೊಡುಗೆಯನ್ನು ಗುರುತಿಸಿ ಕರ್ನಾಟಕ ಜಾನಪದ ಪರಿಷತ್ತು ೨೦೨೨ನೇ ಸಾಲಿನ ಒಂದು ಲಕ್ಷ ರೂ. ಮೌಲ್ಯದ “ನಾಡೋಜ ಎಚ್. ಎಲ್. ನಾಗೇಗೌಡರಾಷ್ಟೀçಯ ಪ್ರಶಸ್ತಿಯನ್ನು ದಿನಾಂಕ: ೧೪/೧೨/೨೦೨೨ರ ಬುಧವಾರ ಬೆಳಗ್ಗೆ ೧೧.೦೦ ಗಂಟೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಅತ್ಯಂತ ಸಂಭ್ರಮದಲ್ಲಿ ನೀಡಿ ಗೌರವಿಸಲಾಯಿತು.