ಕರ್ನಾಟಕ ಜಾನಪದ ಪರಿಷತ್ತಿನ ಸ್ಥಾಪನೆ

ಶ್ರೀ ಎಚ್ ಎಲ್ ನಾಗೇಗೌಡರು ತಮ್ಮ ನಲವತ್ತು ವರ್ಷಗಳ ಸುದೀರ್ಘ ಸೇವಾವಧಿಯಿಂದ ನಿವೃತ್ತರಾದ ಸಂದರ್ಭದಲ್ಲಿ ಶ್ರೀ ಜಿ ನಾರಾಯಣ ಅವರ ನೇತೃತ್ವದಲ್ಲಿ ದಿನಾಂಕ 11.02.1979ರಂದು ಅವರ ಹಿತೈಷಿಗಳು ಬೆಂಗಳೂರಿನಲ್ಲಿ ಅಭಿನಂದನಾ ಸಮಾರಂಭ ಒಂದನ್ನು ಏರ್ಪಡಿಸಿ ಒಂದು ಲಕ್ಷದ ಹದಿನೈದು ಸಾವಿರ ರೂ.ಗಳ ನಿಧಿಯನ್ನು ನಾಗೇಗೌಡರಿಗೆ ಅರ್ಪಿಸಿದರು. ನಾಗೇಗೌಡರು ಈ ನಿಧಿಯನ್ನು ಸ್ವಂತಕ್ಕೆ ಬಳಸಿಕೊಳ್ಳದೆ , ಕನ್ನಡ ನಾಡಿನ ಜಾನಪದ ಪರಂಪರೆಯ ಸಂವರ್ಧನೆ, ಸಂರಕ್ಷಣೆ, ಪ್ರಸರಣ, ದಾಖಲಾತಿ ಮತ್ತು ಪ್ರಚಾರಗಳನ್ನು ಪ್ರಧಾನ ಆಶಯಗಳಾಗಿರಿಸಿಕೊಂಡು 21.03.1979ರಂದು ಕರ್ನಾಟಕ ಜಾನಪದ ಪರಿಷತ್ತನ್ನು ಸ್ಥಾಪನೆ ಮಾಡಿದರು. ಜಾನಪದದ ಸಂಗ್ರಹ ಸಂರಕ್ಷಣೆ ಮತ್ತು ಪ್ರಸಾರಕ್ಕೆ ಯೋಜನೆಗಳನ್ನು ರೂಪಿಸಿದರು. ಇವುಗಳನ್ನು ಜಾರಿಗೆ ತರಲು ಆಡಳಿತ ಮಂಡಳಿಯನ್ನು ರಚಿಸಿದರು. ಪರಿಷತ್ತಿನ ಮೊತ್ತ ಮೊದಲ ಆಡಳಿತ ಮಂಡಳಿ ಸದಸ್ಯರ ವಿವರಗಳು ಹೀಗಿವೆ.

ಸಂಸ್ಥಾಪಕ ಅಧ್ಯಕ್ಷರು : ನಾಡೋಜ  ಶ್ರೀ ಎಚ್.ಎಲ್. ನಾಗೇಗೌಡರು (ನಿವೃತ್ತ ಐ.ಎ.ಎಸ್. ಅಧಿಕಾರಿ ಹಾಗೂ ಸಾಹಿತಿ)

ಸದಸ್ಯರು : ಶ್ರೀ ಜಿ. ನಾರಾಯಣ (ಬೆಂಗಳೂರು ನಗರದ ಮಾಜಿ ಮೇಯರ್),
: ಡಾ|| ಸಿದ್ದಯ್ಯ ಪುರಾಣಿಕ (ನಿವೃತ್ತ ಐ.ಎ.ಎಸ್. ಅಧಿಕಾರಿ ಹಾಗೂ ಸುಪ್ರಸಿದ್ಧ
ಕವಿಗಳು)
: ಪ್ರೊ|| ಜಿ. ವೆಂಕಟಸುಬ್ಬಯ್ಯ (ಸಾಹಿತಿ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ
ಅಧ್ಯಕ್ಷರು)
: ಡಾ|| ಜೀ.ಶಂ. ಪರಮಶಿವಯ್ಯ (ಜಾನಪದ ಪ್ರಾಧ್ಯಾಪಕರು),
: ಶ್ರೀ ಕೆ.ಆರ್. ಲಿಂಗಪ್ಪ (ವಕೀಲರು ಮತ್ತು ಜನಪದ ಗಾಯಕರು),
: ಶ್ರೀ ಏರ್ಯ ಲಕ್ಷ್ಮೀ ನಾರಾಯಣ ಆಳ್ವ (ಸಾಹಿತಿ ಮತ್ತು ಸಮಾಜಸೇವಾ ಧುರೀಣರು),
: ಪ್ರೊ|| ಎಚ್.ಜೆ. ಲಕ್ಕಪ್ಪಗೌಡ (ಜಾನಪದ ವಿದ್ವಾಂಸರು),
: ಶ್ರೀ ಸಿಂಪಿ ಲಿಂಗಣ್ಣ (ಜಾನಪದ ವಿದ್ವಾಂಸರು)

Tag: Namma Parishattu