ನಾಡೋಜ ಶ್ರೀ ಎಚ್.ಎಲ್. ನಾಗೇಗೌಡರು
ಸಂಸ್ಥಾಪಕರು : ನಾಡೋಜ ಶ್ರೀ ಎಚ್.ಎಲ್. ನಾಗೇಗೌಡರು
ಕನ್ನಡ ಸಾಹಿತ್ಯ ಮತ್ತು ಜಾನಪದ ಕ್ಷೇತ್ರವನ್ನು ಶ್ರೀಮಂತಗೊಳಿಸಿದ ಕನ್ನಡ ಸಾರಸ್ವತ ಲೋಕದ ಹಿರಿಯರಲ್ಲಿ ಒಬ್ಬರಾದ ಎಚ್.ಎಲ್. ನಾಗೇಗೌಡರದು ಬಹುಮುಖ ಪ್ರತಿಭೆ. ಕವಿಯಾಗಿ, ಕಥೆಗಾರರಾಗಿ, ಕಾದಂಬರಿಕಾರರಾಗಿ, ಅನುವಾದಕರಾಗಿ, ಜಾನಪದ ಸಂಗ್ರಾಹಕ, ಸಂಶೋಧಕರಾಗಿ, ನಿರ್ಮಾತೃವಾಗಿ ನಾಗೇಗೌಡರು ನಾಡಿಗೆ ಬಹು ದೊಡ್ಡ ಕೊಡುಗೆಯನ್ನು ನೀಡಿದ್ದಾರೆ. ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕು ಹೆರಗನಹಳ್ಳಿಯಲ್ಲಿ 1915ರ ಫೆಬ್ರವರಿ 11 ರಂದು ಜನಿಸಿದ ಎಚ್.ಎಲ್. ನಾಗೇಗೌಡರು ಬಿ.ಎಸ್‍ಸಿ., ಮತ್ತು ಎಲ್.ಎಲ್.ಬಿ., ಪದವಿಗಳನ್ನು ಪೂರೈಸಿ 1941ರಲ್ಲಿ ಮೈಸೂರು ಸಿವಿಲ್ ಸರ್ವಿಸ್ [...]
ಕರ್ನಾಟಕ ಜಾನಪದ ಪರಿಷತ್ತಿನ ಸ್ಥಾಪನೆ
ಕರ್ನಾಟಕ ಜಾನಪದ ಪರಿಷತ್ತಿನ ಸ್ಥಾಪನೆ
ಶ್ರೀ ಎಚ್ ಎಲ್ ನಾಗೇಗೌಡರು ತಮ್ಮ ನಲವತ್ತು ವರ್ಷಗಳ ಸುದೀರ್ಘ ಸೇವಾವಧಿಯಿಂದ ನಿವೃತ್ತರಾದ ಸಂದರ್ಭದಲ್ಲಿ ಶ್ರೀ ಜಿ ನಾರಾಯಣ ಅವರ ನೇತೃತ್ವದಲ್ಲಿ ದಿನಾಂಕ 11.02.1979ರಂದು ಅವರ ಹಿತೈಷಿಗಳು ಬೆಂಗಳೂರಿನಲ್ಲಿ ಅಭಿನಂದನಾ ಸಮಾರಂಭ ಒಂದನ್ನು ಏರ್ಪಡಿಸಿ ಒಂದು ಲಕ್ಷದ ಹದಿನೈದು ಸಾವಿರ ರೂ.ಗಳ ನಿಧಿಯನ್ನು ನಾಗೇಗೌಡರಿಗೆ ಅರ್ಪಿಸಿದರು. ನಾಗೇಗೌಡರು ಈ ನಿಧಿಯನ್ನು ಸ್ವಂತಕ್ಕೆ ಬಳಸಿಕೊಳ್ಳದೆ , ಕನ್ನಡ ನಾಡಿನ ಜಾನಪದ ಪರಂಪರೆಯ ಸಂವರ್ಧನೆ, ಸಂರಕ್ಷಣೆ, ಪ್ರಸರಣ, ದಾಖಲಾತಿ ಮತ್ತು ಪ್ರಚಾರಗಳನ್ನು ಪ್ರಧಾನ [...]