ಜಾನಪದ ಜಗತ್ತು
ಕರ್ನಾಟಕ ಜಾನಪದ ಪರಿಷತ್ತು ಮತ್ತು ಜಾನಪದ ಲೋಕದ ಸಂಸ್ಥಾಪಕ ಅಧ್ಯಕ್ಷರಾದ ನಾಡೋಜ ಶ್ರೀ ಎಚ್.ಎಲ್.ನಾಗೇಗೌಡ ಅವರು ಒಂದು ವಿಶ್ವವಿದ್ಯಾಲಯವು ಮಾಡಬಹುದಾದ ಕೆಲಸವನ್ನು ಮಾಡಿ ಹೋಗಿದ್ದಾರೆ. ಮುಂದಿನ ಜನಾಂಗಕ್ಕೆ ಹಲವು ಸಾಧ್ಯತೆಗಳನ್ನು ತೆರೆದಿಟ್ಟು ಹೋಗಿದ್ದಾರೆ. ನಾಗೇಗೌಡರು ಜಾನಪದ ಕ್ಷೇತ್ರದಲ್ಲಿ ಹಲವು ಪ್ರಥಮ ಕಾರ್ಯಗಳಿಗೆ ನಾಂದಿಹಾಡಿದ್ದರು. ಅವುಗಳಲ್ಲಿ ಕರ್ನಾಟಕ ಜಾನಪದ ಪರಿಷತ್ತು ಮತ್ತು ಜಾನಪದ ಲೋಕದ ಮುಖವಾಣಿಯಾದ ‘ಜಾನಪದ ಜಗತ್ತು’ ಪ್ರಮುಖವಾದುದು.
೧೯೮೦ರ ಜನವರಿ ಒಂದರAದು ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಜಾನದಪ ಜಗತ್ತು ಪತ್ರಿಕೆ ದ್ವೆöÊಮಾಸಿಕ ಪತ್ರಿಕೆಯ ಮೊದಲ ಸಂಚಿಕೆಯನ್ನು ಜಾನಪದ ತಜ್ಞ ಡಾ. ಹಾ ಮಾ ನಾಯಕ ಅವರು ಬಿಡುಗಡೆೆ ಮಾಡಿದ್ದು ಈಗ ಇತಿಹಾಸ. ತಮ್ಮ ಉದ್ಘಾಟನಾ ಭಾಷಣದಲ್ಲಿ ಅವರು ಮಾತನಾಡಿದ್ದು ಇಂದಿಗೂ ಮಹತ್ವಪೂರ್ಣವಾಗಿದೆ. ‘ ಜಾನಪದಕ್ಕಾಗಿಯೇ ಮೀಸಲಾದ ನಿಯತಕಾಲಿಕವೊಂದು ಈಡೇರಿಸಲು ಮುಂದೆ ಬಂದದ್ದು ನಮ್ಮ ನಾಗೇಗೌಡರು ಮತ್ತು ಅವರ ಕಾರ್ಯಾಸಕ್ತಿ ದ್ಯೋತಕವಾಗಿದೆ. ಕನ್ನಡ ಜಾನಪದ ಕ್ಷೇತ್ರದಲ್ಲಿ ವೈಜ್ಞಾನಿಕ ದೃಷ್ಟಿಯ , ಆಳವಾದ ಅಧ್ಯಯನದ ಬರಹಗಳಿಗೆ ಪ್ರೇರಣೆಯನ್ನೊದಗಿಸಿ, ಪ್ರೋತ್ಸಾಹಿಸಿ ಅಗತ್ಯವಾದ ಪರಿಭಾಷೆಯನ್ನು ಬೆಳೆಸಿ ಮುನ್ನಡೆಸುವ ಜವಾಬ್ದಾರಿಯನ್ನು ಜಾನಪದ ಜಗತ್ತು ನಿರ್ವಹಿಸಿದಾಗ ಮಾತ್ರವೇ ಅದರ ಅಸ್ತಿತ್ವ ಸಾರ್ಥಕಗೊಳ್ಳುವುದು. ಈ ಅಪರೂಪದ ಕಾರ್ಯಕ್ರಮದಲ್ಲಿ ಡಾ. ರಂ ಶ್ರೀ ಮುಗಳಿಯವರು, ಸಂಸ್ಥಾಪಕ ಅಧ್ಯಕ್ಷರಾದ ನಾಗೇಗೌಡರು, ಪರಿಷತ್ತಿನ ಸಂಸ್ಥಾಪಕ ಸದಸ್ಯರಾದ ನಾಡೋಜ ಜಿ ನಾರಾಯಣ , ಪ್ರೊ ಜಿ, ವೆಂಕಟಸುಬ್ಬಯ್ಯ ಡಾ. ಸಿದ್ದಯ್ಯ ಪುರಾಣಿಕ ಅವರುಗಳು ಉಪಸ್ಥಿತರಿದ್ದರು. ಪತ್ರಿಕೆಯ ಪ್ರಧಾನ ಸಂಪಾದಕರು ನಾಗೇಗೌಡರು, ಸಂಪಾದಕದ್ವಯರು ಶ್ರೀ ಗೊ.ರು.ಚÀನ್ನಬಸಪ್ಪ, ಶ್ರೀ ಎಚ್.ಜೆ.ಲಕ್ಕಪ್ಪಗೌಡ ಸಹ ಸಂಪಾದಕರಾದ ಶ್ರೀ ಟಿ. ಗೋವಿಂದರಾಜು ಅವರುಗಳು ಇದ್ದರು.ಆರಂಭದಲ್ಲಿ ಜಾನಪದ ಜಗತ್ತು ಪತ್ರಿಕೆ ದೈಮಾಸಿಕವಾಗಿತ್ತು ಮತ್ತೆ ತ್ರೆöÊಮಾಸಿಕ ಪತ್ರಿಕೆಯಯಿತು. ಈಗ ಮತ್ತೆ ದೈಮಾಸಿಕ ಪತ್ರಿಕೆಯಾಗಿದೆ. ನಾಗೇಗೌಡರ ನಂತರ ನಾಡೋಜ ಜಿ ನಾರಾಯಣ ಮತ್ತು ಶ್ರೀ ಟಿ.ತಿಮ್ಮೇಗೌಡರು, ಈಗ ಪ್ರೊ. ಹಿ ಶಿ ರಾಮಚಂದ್ರೇಗೌಡ ಪ್ರಧಾನ ಸಂಪಾದಕರಾಗಿದ್ದಾರೆ. ಪತ್ರಿಕೆಗೆ ಕಳೆದ ೪೦ ವರ್ಷಗಳಲ್ಲಿ ಹಲವಾರು ಸಂಪಾದಕರು ಸಹ ಸಂಪಾದಕರು ಆಗಿ ಹೋಗಿದ್ದಾರೆ. ಪ್ರೊ. ಡಿ ಲಿಂಗಯ್ಯ, ಶ್ರೀ ಚಕ್ಕೆರೆ ಶಿವಶಂಕರ್, ಶ್ರೀ ವ ನಂ .ಶಿವರಾಮು, ಡಾ.ರಾಜೇಗೌಡ ಹೊಸಹಳ್ಳಿ, ಡಾ. ಕುರುವ ಬಸವರಾಜ್. ಡಾ.ನಂದಕುಮಾರ ಹೆಗಡೆ, ಡಾ. ಜಗನ್ನಾಥ ಹೆಬ್ಬಾಳೆ ಹೀಗೆ ಇವರೆಲ್ಲರೂ ತಮ್ಮ ಹೊಸ ಹೊಸ ವಿಚಾರಗಳಿಂದ ಜಾನಪದ ಜಗತ್ತು ಪತ್ರಿಕೆಯನ್ನು ತಮ್ಮ ಸಮಯದಲ್ಲಿ ಹೊಸ ರೂಪ ನೀಡಿ ಪ್ರಕಟಿಸಿದ್ದಾರೆ.
ಹೀಗೆ ೪೦ ವರ್ಷಗಳ ಇತಿಹಾಸ ಇರುವ ಜಾನಪದ ಜಗತ್ತು ಪತ್ರಿಕೆ ಕನ್ನಡ ನಾಡಿನ ಶ್ರೀಮಂತ ಜಾನಪದ ಕ್ಷೇತ್ರದ ಎಷ್ಟೋ ದಾಖಲೆಗಳನ್ನು ಸೆರೆ ಹಿಡಿದಿದೆ. ಗ್ರಾಮೀಣ ಸಾಂಸ್ಕೃತಿಕ ಬದುಕಿನ ಬೇರುಗಳಾದ ಜನಪದ ಸಾಹಿತ್ಯ , ಭಾಷೆ, ಹಬ್ಬ ಹರಿದಿನಗಳು, ಕಲೆಗಳು, ಸಂಪ್ರದಾಯಗಳು ಹೀಗೆ ಕನ್ನಡ ನಾಡಿನ ಜಾನಪದ ಸಿರಿ ಸೊಗಡನ್ನು ಜಾನಪದ ಜಗತ್ತು ದಾಖಲಿಸಲಾಗಿದೆ. ಈ ದಾಖಲೆಗಳು ವಿದ್ವಾಂಸರು, ಸಂಶೋಧನಾರ್ಥಿಗಳು ಮತ್ತು ವಿದ್ಯಾರ್ಥಿಗಳು ಮತ್ತು ಜನಪದಾಸಕ್ತರಿಗೆ ತುಂಬು ಆಕರವಾಗಿದೆ.
ಚಂದಾದಾರಗಲು ಮನವಿ
ಕರ್ನಾಟಕ ಜಾನಪದ ಪರಿಷತ್ತು
ಜಾನಪದ ಸಿರಿಭುವನ
ನಂ.೧. ಜಲದರ್ಶಿನಿ ಬಡಾವಣೆ, ಎಂ. ಎಸ್. ರಾಮಯ್ಯ ಆಸ್ಪತ್ರೆ ಮಹಾದ್ವಾರದ ಹತ್ತಿರ
ನ್ಯೂ ಬಿಇಎಲ್ ರಸ್ತೆ, ಬೆಂಗಳೂರು – ೫೬೦ ೦೪೦
ದೂರವಾಣಿ : ೦೮೦- ೨೩೬೦೫೦೩೩
ಜಾನಪದ ಜಗತ್ತು ಪತ್ರಿಕೆಗೆ ಚಂದಾದಾರರಾಗಲು ಮನವಿ
ಚಂದಾ ವಿವರ
ಆಜೀವಾ ಚಂದಾದಾರರಿಗೆ – ರೂ. ೧೦೦೦/- ಹಾಗೂ ಸಂಘ ಸಂಸ್ಥೆ, ಶಾಲಾ ಕಾಲೇಜುಗಳಿಗೆ – ರೂ. ೧೫೦೦/- ಇದರೊಡನೆ ಕರ್ನಾಟಕ ಜಾನಪದ ಪರಿಷತ್ತು ಹೆಸರಿಗೆ ಕಳಿಸಿಕೊಡಬೇಕಾಗಿ ಕೋರಿಕೆ.
ಚಂದಾ ಅರ್ಜಿ ನಮೂನೆ
ಹೆಸರು : ……………………………………………………………………………………………
ಅಂಚೆ ವಿಳಾಸ : : ……………………………………………………………………………………………
ನಾನು ಚಂದಾ ಹಣ : ————————— ರೂ. ಗಳನ್ನು ನಗದು/ಚಕ್/ಡಿ.ಡಿ ಮೂಲಕ ಪಾವತಿ ಮಾಡಿ ಜಾನಪದ ಜಗತ್ತು ಪತ್ರಿಕೆಯ ಚಂದಾದಾರನಾಗಲು ಒಪ್ಪಿರುತ್ತೇನೆ.
ಡಿ. ಡಿ / ಚಕ್ ನಂ : ——————
ತಾರೀಖು : ——————————–