ನಾಡೋಜ ಎಚ್.ಎಲ್ ನಾಗೇಗೌಡ ಕಲಾಶಾಲೆ ಜನಪದ ಕಲೆಗಳ ತರಬೇತಿ ಕೇಂದ್ರ

ನಶಿಸಿ ಹೋಗುತ್ತಿರುವ ಜಾನಪದ ಕಲೆಗಳನ್ನು ಉಳಿಸಿ ಬೆಳೆಸಿಕೊಂಡು ಸಂರಕ್ಷರಿಸಿಕೊಂಡು ಹೋಗುವ ಸಾಂಸ್ಕೃತಿಕ ಮಹಾಕಾರ್ಯವನ್ನು ಕರ್ನಾಟಕ ಜಾನಪದ ಪರಿಷತ್ತು ಜವಾಬ್ದಾರಿಯುತವಾಗಿ ನಡೆಸಿಕೊಂಡು ಬರುತ್ತಿದೆ. ಜನಪದ ಕಲೆ ನಾಡಿನ ಅಮೂಲ್ಯ ಆಸ್ತಿ. ಜನಪದ ಕಲೆಗಳ ಅಭಿವ್ಯಕ್ತಿಗಳಾದ ನೃತ್ಯ ವೈಖರಿ, ಸಂಗೀತ, ವಾದ್ಯ, ವೇಷ-ಭೂಷಣ, ಹಾಡು-ಕುಣಿತ-ಅಭಿನಯ ಹಾಗು ಜನ ಸಂಭ್ರಮ ಪರಂಪರಾಗತವಾಗಿ ಕರ್ನಾಟಕದಾದ್ಯಂತ ಶತ ಶತಮಾನಗಳಿಂದ ನಮ್ಮ ಪೀಳಿಗೆಗೆ ಲಭಿಸುತ್ತದೆ. ಆದರೆ ತಲಾ ತಲಾಂತರದಿಂದ ಬಂದ ಈ ಕಲೆಗಳನ್ನು ನಮ್ಮ ಮುಂದಿನ ಪೀಳಿಗೆಗೆ ಜವಾಬ್ದಾರಿಯುತವಾಗಿ ಮತ್ತು ಗೌರವಯುತವಾಗಿ ವರ್ಗಾಯಿಸುವುದು ನಮ್ಮ ಕರ್ತವ್ಯ. ಆದಕಾರಣ ಪರಿಷತ್ತು ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಗೆ, ಯುವಕ-ಯುವತಿ ಮಂಡಳಿಗಳಿಗೆ, ಸಂಘ-ಸಂಸ್ಥೆಗಳ ಸದಸ್ಯರುಗಳಿಗೆ ಜನಪದ ಕುಣಿತ-ಸಂಗೀತ, ಕಲೆ ಹಾಗೂ ಕ್ರೀಡೆಗಳನ್ನು ಜನಪದ ರಂಗಭೂಮಿ ಪ್ರಕಾರಗಳಲ್ಲಿ ತರಬೇತಿ ನೀಡುವ ಯೋಜನೆಯನ್ನು ಹೊಂದಿರುತ್ತದೆ.

ಜನಪದ ಕಲಾವಿದರ ಕಲೆಗಳಿಗೆ ಹೊಸ ಸ್ಪರ್ಶ ಹಾಗೂ ಶರವೇಗದಲ್ಲಿ ಸಾಗುತ್ತಿರವ ಆಧುನಿಕ ಜೀವನದಲ್ಲಿ ನೆಲಮೂಲ ಸಂಸ್ಕೃತಿಯ ಕಲೆಗಳನ್ನು ಕಲಿಯಲು ಇಚ್ಛಿಸುವ ಆಸಕ್ತರಿಗೆ ಕಲಾ ತರಬೇತಿನೀಡುವುದು ನಾಡೋಜ ಎಚ್.ಎಲ್ ನಾಗೇಗೌಡ ಕಲಾಶಾಲೆ ಯ ಮುಖ್ಯ ಉದ್ದೇಶವಾಗಿದೆ. ಕರ್ನಾಟಕ ಜನಪದ ಸಂಸ್ಕೃತಿ ಮತ್ತು ಜನಪದ ಜೀವನವನ್ನು ಸಮಕಾಲೀನ ಸಂದರ್ಭಕ್ಕೆ ಪ್ರಸ್ತುತ ಪಡಿಸುವುದು ಪರಿಷತ್ತಿನ ಆಶಯವಾಗಿದೆ. ಪ್ರತಿ ಜಿಲ್ಲೆಗಳಲ್ಲಿ ಕಲೆಗಳ ತರಬೇತಿಗಳನ್ನು ಹಮ್ಮಿಕೊಂಡು ಈಗಾಗಲೇ ಹಲವಾರು ಕಲೆಗಳ ತರಬೇತಿಗಳನ್ನು ಪರಿಷತ್ತು ನಡೆಸುತ್ತಾ ಬಂದಿದೆ.ನಾಡೋಜ ಎಚ್.ಎಲ್ ನಾಗೇಗೌಡ ಕಲಾಶಾಲೆ ಜಾನಪದ ಲೋಕದಲ್ಲಿ ಇದೆ.

ಜಾನಪದ ಲೋಕದಲ್ಲಿ ನಿರಂತರವಾಗಿ ಹೆಸರಾಂತ ಜನಪದ ಕಲಾವಿದರಿಂದ ಕಲೆಗಳ ತರಬೇತಿಯನ್ನು ನೀಡಲಾಗುವುದು. ಗ್ರಾಮೀಣ ಸಂಘ ಸಂಸ್ಥೆಗಳು , ಯುವ ಜನ ಸೇವಾ ಸಂಸ್ಥೆಗಳು ಹಾಗೂ ಮಹಿಳಾ ಸಂಘಟನೆಗಳು ಈ ಶಾಲೆಯಯಿಂದ ಕಲೆಗಳ ತರಬೇತಿ ಹೊಂದಲು ಅವಕಾಶ ಕಲ್ಪಿಸಲಾಗಿದೆ. ಇಲ್ಲಿ ಕಲಾವಿದರಿಗೆ ತರಬೇತಿ ನೀಡಲು ಅವಕಾಶ ಕಲ್ಪಿಸಲಾಗಿದೆ. ನಾಡಿನ ನಶಿಸಿಹೋಗುತ್ತಿರವ ಅಳಿವಿನ ಅಂಚಿನಲ್ಲಿರುವ ಕಲೆಗಳ ಸಂರಕ್ಷಣೆ ಹಾಗೂ ಸಂವರ್ಧನೆಯ ಜೊತೆಗೆ ಕಲೆಗಳ ತರಬೇತಿಗೆ ಮಾನ್ಯತೆ ನೀಡುವುದು ಜೊತೆ ಜೊತೆಯಲ್ಲಿ ಕರ್ನಾಟಕದ ಜನಪದ ವೈಭವಗಳನ್ನು ಮೆರೆಸುವುದು ಜನಪದ ಕಲೆಗಳನ್ನು ಆಯ್ದುಕೊಂಡು ತರಬೇತಿಗೆ ಅಣಿಗೊಳಿಸಿಸುವುದು ಪರಿಷತ್ತಿನ ನಿರಂತರ ಕಾಯಕವಾಗಿದೆ

ನಾಡೋಜ ಎಚ್.ಎಲ್.ನಾಗೇಗೌಡ ಕಲಾ ಶಾಲೆ

ಜಾನಪದ ಕಾಶಿ ಎಂದೇ ಪ್ರಸಿದ್ಧಿ ಆಗಿರುವ ಜಾನಪದ ಲೋಕದಲ್ಲಿ ನಾಡೋಜ ಎಚ್.ಎಲ್.ನಾಗೇಗೌಡರ ನೆನಪಿನಲ್ಲಿ ಮಾನ್ಯ ಅಧ್ಯಕ್ಷರಾದ ಟಿ.ತಿಮ್ಮೇಗೌಡ ಕಲಾ ಶಾಲೆಯನ್ನು ಪ್ರಾರಂಭಿಸಿದರು. ಇದರ ಉದ್ದೇಶ ಯುವ ಮನುಸ್ಸುಗಳಲ್ಲಿ (ಯುವಕರಲ್ಲಿ) ಗ್ರಾಮೀಣ ಭಾಗದ ಹಾಡು, ಕುಣಿತ, ಸಾಹಿತ್ಯ, ವಾದ್ಯಗಳು, ಆಟಗಳು, ಜನಪದ ಸಂಸ್ಕೃತಿಗಳ ಬಗ್ಗೆ ಅರಿವು ಮೂಡಿಸುವುದೇ ಆಗಿದೆ. ಅಂದಿನಿಂದ ಶಾಲಾ-ಕಾಲೇಜುಗಳಿಗೆ ಬೇಟಿ ನೀಡಿ ಜನಪದ ಕಲೆ ಮತ್ತು ಜನಪದ ಜೀವನ ಶೈಲಿಯ ಸಾಕ್ಷ್ಯಚಿತ್ರ ತೋರಿಸುವ ಕಾರ್ಯಕ್ರಮ ಮತ್ತು ಅಪರೂಪದ ಮತ್ತು ಅಳಿವಿನ ಹಂಚಿನಲ್ಲಿರುವ ಜನಪದ ಪ್ರಕಾರವನ್ನು ಹಿರಿಯ ಜನಪದ ಗುರುಗಳಿಂದ ಕಲಾ ತರಬೇತಿ ಮತ್ತು ಶಿಬಿರಗಳನ್ನು ನಡೆಸುತ್ತಿದೆ.

‘ಶಾಲಾ-ಕಾಲೇಜುಗಳ ನಡೆ ಜಾನಪದ ಲೋಕದ ಕಡೆ’ ಮತ್ತು ‘ಜಾನಪದ ಲೋಕದ ನಡೆ ಶಾಲಾ-ಕಾಲೇಜಿನ ಕಡೆ’ ಎಂಬ ಶೀರ್ಷಿಕೆಯಲ್ಲಿ ಕರ್ನಾಟಕ ಜಾನಪದ ಪರಿಷತ್ತು ಕರ್ನಾಟಕದ ಸುತ್ತೇಳು ಜಿಲ್ಲೆಗಳ ಶಾಲಾ ಕಾಲೇಜು ಮಕ್ಕಳಿಗೆ ಜಾನಪದದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದೆ. ಜಾನಪದ ಲೋಕದ ತಂಡ ಶಾಲೆ-ಕಾಲೇಜಿಗೆ ಭೇಟಿ ನೀಡಿ ಜನಪದ ಹಾಡುಗಾರಿಕೆ, ಜನಪದ ವಾದ್ಯಗಳು, ನಾಟಕ ತರಬೇತಿ, ಕರಕುಶಲ ಕಲಾ ತರಬೇತಿಗಳನ್ನು ನೀಡುತ್ತಿದೆ. ನಾವು ಆಗಾಗ ನಡೆಸುವ ಜನಪದ ಕಲಾ ಶಿಬಿರಗಳಲ್ಲಿ ಭಾಗವಹಿಸಿ ಜಾನಪದ ಕಲೆಗಳನ್ನೂ ಕಲಿಯಬಹುದು. ಇದರಿಂದ ವಿದ್ಯಾರ್ಥಿಗಳಿಗೆ ಓದಿನ ಆಸಕ್ತಿ ಜೊತೆಗೆ ಸಹ-ಪಠ್ಯ ಚಟುವಟಿಕೆಗಳಿಗೆ ಮತ್ತು ಮಕ್ಕಳ ಮನೋ ವಿಕಾಸಕ್ಕೆ ಅನುಕೂಲವಾಗುತ್ತದೆ.

ಜನಪದ ಕಲೆ ಸಾಹಿತ್ಯ ಸಂಸ್ಕೃತಿಯ ಸಂಗ್ರಹ, ದಾಖಲೀಕರಣ ಜೊತೆಗೆ ಯುವಕರಿಗೆ ಪ್ರಸರಣದ ಭಾಗವಾಗಿ ಜನಪದ ಕಲೆ, ಸಾಹಿತ್ಯ, ಸಂಸ್ಕೃತಿ, ಸಾದ್ಯ ಸಂಗೀತದ ತರಬೇತಿ ಶಿಬಿರಗಳನ್ನು ನಡೆಸಲಾಗುತ್ತಿದೆ.. ಶಾಲೆ-ಕಾಲೇಜುಗಳಿಗೆ ಪಠ್ಯೇತರ ಚಟುವಟಿಕೆಗೆ ಶೈಕ್ಷಣಿಕ ಪ್ರವಾಸಕ್ಕೆಂದು ಜಾನಪದ ಲೋಕಕ್ಕೆ ಬರುವ ವಿದ್ಯಾರ್ಥಿಗಳಿಗೆ ಜನಪದದ ಅರಿವು ಮೂಡಿಸುತ್ತಿದೆ. ಪ್ರಸ್ತುತ ಈ ಕಲಾ ಶಾಲೆಯಲ್ಲಿ ತರಬೇತಿ ಪಡೆದ ವಿದ್ಯಾರ್ಥಿಗಳು ಅನೇಕ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ಪಡೆದು ಸಂಸ್ಥೆಗೆ ಹೆಸರು ತಂದಿದ್ದಾರೆ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಪ್ರದರ್ಶನಗಳನ್ನು ನೀಡುತ್ತಿದ್ದಾರೆ.