ಕರ್ನಾಟಕ ಜಾನಪದ ಪರಿಷತ್ತಿನ ಸ್ಥಾಪನೆ

ಶ್ರೀ ಎಚ್ ಎಲ್ ನಾಗೇಗೌಡರು ತಮ್ಮ ನಲವತ್ತು ವರ್ಷಗಳ ಸುದೀರ್ಘ ಸೇವಾವಧಿಯಿಂದ ನಿವೃತ್ತರಾದ ಸಂದರ್ಭದಲ್ಲಿ ಶ್ರೀ ಜಿ ನಾರಾಯಣ ಅವರ ನೇತೃತ್ವದಲ್ಲಿ ದಿನಾಂಕ 11.02.1979ರಂದು ಅವರ ಹಿತೈಷಿಗಳು ಬೆಂಗಳೂರಿನಲ್ಲಿ ಅಭಿನಂದನಾ ಸಮಾರಂಭ ಒಂದನ್ನು ಏರ್ಪಡಿಸಿ ಒಂದು ಲಕ್ಷದ ಹದಿನೈದು ಸಾವಿರ ರೂ.ಗಳ ನಿಧಿಯನ್ನು ನಾಗೇಗೌಡರಿಗೆ ಅರ್ಪಿಸಿದರು. ನಾಗೇಗೌಡರು ಈ ನಿಧಿಯನ್ನು ಸ್ವಂತಕ್ಕೆ ಬಳಸಿಕೊಳ್ಳದೆ , ಕನ್ನಡ ನಾಡಿನ ಜಾನಪದ ಪರಂಪರೆಯ ಸಂವರ್ಧನೆ, ಸಂರಕ್ಷಣೆ, ಪ್ರಸರಣ, ದಾಖಲಾತಿ ಮತ್ತು ಪ್ರಚಾರಗಳನ್ನು ಪ್ರಧಾನ ಆಶಯಗಳಾಗಿರಿಸಿಕೊಂಡು 21.03.1979ರಂದು ಕರ್ನಾಟಕ ಜಾನಪದ ಪರಿಷತ್ತನ್ನು ಸ್ಥಾಪನೆ ಮಾಡಿದರು. ಜಾನಪದದ ಸಂಗ್ರಹ ಸಂರಕ್ಷಣೆ ಮತ್ತು ಪ್ರಸಾರಕ್ಕೆ ಯೋಜನೆಗಳನ್ನು ರೂಪಿಸಿದರು.

ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ

ಪ್ರತಿಕ್ರಿಯೆ

ನಿಮ್ಮ ಇಮೇಲ್ ವಿಳಾಸವನ್ನು ನಾವು ಪಬ್ಲಿಷ್ ಮಾಡುವುದಿಲ್ಲ .


*


ಚಿಣ್ಣರ ಬೇಸಿಗೆ ಶಿಬಿರ

This will close in 50 seconds